ಪತ್ರಿಕೆಯ ಪರಿಚಯ
ಕನ್ನಡ ಅಧ್ಯಯನ, ಸಾಹಿತ್ಯ ಮತ್ತು ಸಂಸ್ಕೃತಿಯ ಗುಣಮಟ್ಟದ ಸಂಶೋಧನೆಗಾಗಿ ಸಮರ್ಪಿತ ವೇದಿಕೆ.
ಮಾಸಿಕ
ಬಹುಶಿಸ್ತೀಯ
ಪಿಯರ್-ರಿವ್ಯೂಡ್ • ISSN
ನಮ್ಮ ಬಗ್ಗೆ / ಪತ್ರಿಕೆಯ ಆಶಯ
- ಭಾರತೀಯ ಭಾಷಾ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಅರ್ಥೈಸಿಕೊಳ್ಳುವುದು.
- ಭಾರತೀಯ ಭಾಷೆಗಳ ಸಾಹಿತ್ಯವನ್ನು ಒಳಗೊಂಡಂತೆ ಪಾಶ್ಚಾತ್ಯ ಸಾಹಿತ್ಯ ಮತ್ತು ಸಂಸ್ಕೃತಿಯ ತಾತ್ವಿಕ ಚಿಂತನೆಗಳನ್ನು ಕನ್ನಡ ಸಾಹಿತ್ಯದ ಮೂಲಕ ಪರಿಚಯಿಸುವುದು.
- ಸಾಹಿತ್ಯವು ಇತರ ಜ್ಞಾನಶಿಸ್ತುಗಳೊಟ್ಟಿಗೆ ಹೊಂದಿರುವ ಅಂತರ್ಸಂಬಂಧವನ್ನು ಪರಿಚಯಿಸುವುದು.
- ಭಾರತೀಯ ಹಾಗೂ ಪಾಶ್ಚಾತ್ಯ ಸಾಹಿತ್ಯಗಳಲ್ಲಿ ಕಂಡುಬರುವ ಹೊಸ ಪರಿಕಲ್ಪನೆಗಳು, ಶೈಲಿ–ರೂಪಗಳು, ನೋಟ–ಧೋರಣೆಗಳನ್ನು ಪರಿಚಯಿಸುವುದು.
- ಅಂಚಿಗೆ ತಳ್ಳಲ್ಪಟ್ಟವರ ಕಥಾನಕಗಳನ್ನು ಮುನ್ನೆಲೆಗೆ ತರುವುದು.
- ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಮೇಲೆ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ತಾತ್ವಿಕ ಪ್ರಭಾವಗಳನ್ನು ಪರಿಶೀಲಿಸುವುದು. ಮೊದಲಾದ ಆಶಯಗಳನ್ನು ಸಾಹಿತ್ಯ ಪ್ರಸ್ತಾನ ಪತ್ರಿಕೆಯು ಹೊಂದಿರುತ್ತದೆ.
ಸೂಚನೆ:
ಪ್ರಸ್ತುತ ಈ ನಿಯತಕಾಲಿಕೆಯು ಮಾಸಿಕದ್ದಾಗಿರುತ್ತದೆ.
ಸಂಶೋಧನ ಪ್ರಬಂಧಗಳನ್ನು ಕಳಿಸುವಾಗ ಅನುಸರಿಸಬೇಕಾದ ನಿಯಮಗಳು
- ತಮ್ಮ ಬರಹಗಳು ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲಿ ಬರೆಯಬಹುದು.
- ಲೇಖನಗಳು ಬಹುಶಿಸ್ತೀಯ ಆಯಾಮವನ್ನು ಹೊಂದಿರಬಹುದು.
- ಲೇಖನವು ೧೫೦೦ ರಿಂದ ೨೦೦೦ ಪದಗಳ ಮಿತಿಯಲ್ಲಿರಬೇಕು.
- ನುಡಿ 01E/ಯುನಿಕೋಡ್ ನುಡಿ 01E; ಅಕ್ಷರ ಗಾತ್ರ 14; ವಾಕ್ಯ ಮಧ್ಯದ ಅಂತರ 1.5 ಇರಬೇಕು.
- ಪತ್ರಿಕೆ ಪೀರ್ ರಿವ್ಯೂಡ್ ಆಗಿದ್ದು ISSN ಹೊಂದಿರುತ್ತದೆ.
- ನಿಗದಿತ ಕಾಲಾವಧಿಯಲ್ಲಿ ಮಾತ್ರ ಲೇಖನಗಳನ್ನು ಕಳುಹಿಸಬೇಕು; ನಂತರ ಬಂದ ಲೇಖನಗಳನ್ನು ಸ್ವೀಕರಿಸಲಾಗುವುದಿಲ್ಲ.
- ಲೇಖನ ಪ್ರಕಟಣೆಗೆ ಯಾವುದೇ ಶುಲ್ಕವಿಲ್ಲ.
- ಸಾರಲೇಖ (Abstract), ಮುಖ್ಯ ಪದಗಳು (Keywords), ಅಡಿಟಿಪ್ಪಣಿಗಳು ಮತ್ತು ಪರಾಮರ್ಶನ ಗ್ರಂಥಗಳು ಕಡ್ಡಾಯ.
- ಕಾಗುಣಿತ ದೋಷಗಳಿರಬಾರದು.
- ಪ್ರಬಂಧದ ಲೇಖಕರ ಪೂರ್ಣ ವಿಳಾಸ, ಇಮೇಲ್ ಹಾಗೂ ದೂರವಾಣಿ ಸಂಖ್ಯೆ ಕಡ್ಡಾಯವಾಗಿ ನಮೂದಿಸಿರಬೇಕು.
- ಲೇಖನ ಪ್ರಕಟಣೆ ಪರಿಶೀಲನಾ ಸಮಿತಿಯ ಆಯ್ಕೆಗೆ ಒಳಪಡುತ್ತದೆ; ಅತ್ಯುತ್ತಮ ಲೇಖನಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ.
- ಸಂಶೋಧನಾ ಶಿಸ್ತಿನ ನಿಯಮಾವಳಿಗಳಿಗೆ ಅನುಗುಣವಾಗಿರಬೇಕು.
ಇ-ಮೇಲ್ ಮೂಲಕ ಕಳುಹಿಸಿ
ನೀವು ಕಳುಹಿಸಬೇಕಾದ ಇ-ಮೇಲ್ ವಿಳಾಸ: kumara@claretcollege.edu.in